Kannada Poetry

ಶಾಂತಿ ಪ್ರವಚನ

ತೆಲುಗು : ಶ್ರೀ ಕವಿ ಯಾಕೂಬ್
ಕನ್ನಡಕ್ಕೆ : ಎಸ್ ಡಿ ಕುಮಾರ್

ಶಾಂತಿ ಪ್ರವಚನ

ನಾವು ಬಯಸುವ ಶಾಂತಿ
ಎದೆಬಡಿತ ಮತ್ತು ಬಂದೂಕಿನ ತುದಿಯ
ನಡುವೆ ಜೀಕಾಡುತ್ತೆ

ನಾವು ಬಯಸುವ ಶಾಂತಿ
ಸಾಯುವ ಮನುಷ್ಯನ ಅಂತಿಮ
ಶ್ವಾಸದಂತಿದೆ ಮಂಚದಮೇಲೆ

ನಾವು ಬಯಸುವ ಶಾಂತಿ
ಒಂದು ಮಂದಿರ ಒಂದು ಮಸೀದಿ ಒಂದು
ಸ್ಫೋಟ :ಒಂದು ಬಂದೂಕು ಶೂಟ್ ನ ವಿರಾಮ
ಮುಕ್ತಾಯ ಮುಂದುವರಿಕೆ ಗಾಯಾಳು ಹಾಡು
ಉದುರಿಬಿದ್ದ ನಿನಾದದಂತಿದೆ

ನಿಷೇಧಿಸಲ್ಪಟ್ಟು ಗಂಟಲಲ್ಲೇ ಸಮಾಧಿಯಾಗುವ ಕವಿತಾ ಪಾದದಂತಿದೆ
ದಾಡಿ ಬೆಳೆಸಿದ ಮುಲ್ಲಾಗಳ ಸಾಧುಗಳ
ಶಾಂತಿ ಪ್ರವಚನಾರಾಗಗಳ ನಡುವೆ
ತಬ್ಬಿಬ್ಬಾಗಿದೆ ಮನಶ್ಶಾಂತಿ

ನಮ್ಮ ಶಾಂತಿ
ಕಾಲ್ಮುರುಕೊಂಡ ನಾಯಿಮರಿಯ
ನಡಿಗೆಯಂತೆ ಕುಂಟುತ್ತಲೇ ಇದೆ
ರೇಷನ್ ನಲ್ಲಿ ಶಾಂತಿಯನ್ನು ಈ ರಾಜ್ಯ
ಎಷ್ಟು ಅಲಾಟ್ ಮಾಡುತ್ತೋ ಅಷ್ಟನ್ನು ಮಾತ್ರ
ಚೀಲದಲ್ಲಿ ತುಂಬಿಸಿಕೊಳ್ಳಬೇಕು
ಇಷ್ಟು ಮಾತ್ರ ಸಾಕು ಅಂತ ಸುಮ್ಮನಿದ್ದುಬಿಡಬೇಕು….. ಓಹ್….

Leave a Reply

avatar
  Subscribe  
Notify of